How two sisters protested against plastic ban-ಹೇಗೆ ಈ ಸಹೋದರಿಯರು ಸತ್ಯಾಗ್ರಹದ ಮೂಲಕ plastic ಬ್ಯಾನ್ ಮಾಡುವಲ್ಲಿ ಸಪಲಾದರೂ.
ಹಲೋ ಫ್ರೆಂಡ್ಸ್ ನಾನು ರಾಮ್ ಗಿರಿ ಮತ್ತೊಂದು ಹೊಸ ಅದ್ಭುತವಾದ ಸ್ಟೋರಿಯೊಂದಿಗೆ ನಿಮಗೆ ಸ್ವಾಗತ-ಸುಸ್ವಾಗತ.
ನಿಮಗೆ ಗೊತ್ತಾ ಜಗತ್ತೀನಿ ಅತಿ ಚಿಕ್ಕ ವಯಸ್ಸಿನ ಸತ್ಯಾಗ್ರಹಿ ಯಾರು ಅಂತ, ಅವರ ಹೆಸರು Greta Thunberg, ಇವಳ ಪೂರ್ಣ ಹೆಸರು Greta Tintin Eleonora Ernman Thunberg. ಮೂಲತಃ ಸ್ವೀಡನ್ ದೇಶದ ಈ ಯುವತಿ climate change ನಂಗೆ ಕುರಿತು ಒಂದು ಶಾಂತಿಯುತ ಪ್ರತಿಭಟನೆ ಮಾಡಿದ್ದಳು
ಸ್ವೀಡನ್ ನ ಹನ್ಬರ್ಗ್ನಲ್ಲಿ 2018 ರಲ್ಲಿ 15 ನೇ ವಯಸ್ಸಿನಲ್ಲಿ Greta Thunberg ಸ್ವೀಡಿಷ್ ಸಂಸತ್ತಿನ ಹೊರಗೆ ಪ್ರತಿಭಟಿಸಲು ಆರಂಭಿಸಿದಳು ."ಹವಾಮಾನಕ್ಕಾಗಿ ಶಾಲಾ ಮುಷ್ಕರ" ಎಂಬ ಫಲಕವನ್ನು ಅವಳು ಹಿಡಿದು ಜಗತ್ತಿನ ಪ್ರಭಲ ರಾಷ್ಟ್ರಗಳ ಸರ್ಕಾರವನ್ನ ಹವಾಮಾನದ ಕಾಳಜಿ ಬಗ್ಗೆ ಒತ್ತಾಯಿಸಿದ್ದಳು.
ಆಕೆಯ ಈ ಸಣ್ಣ ಅಭಿಯಾನವು ಜಾಗತಿಕ ಪರಿಣಾಮವನ್ನು ಬೀರಿತು, ಪ್ರಪಂಚದಾದ್ಯಂತ ಸಾವಿರಾರು ಯುವಕರು ತಮ್ಮದೇ ಮುಷ್ಕರಗಳನ್ನು ಸಂಘಟಿಸಲು ಪ್ರೇರೇಪಿಸಿತು. ಡಿಸೆಂಬರ್ 2018 ರ ಹೊತ್ತಿಗೆ, 20,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು - UK ಯಿಂದ ಜಪಾನ್ಗೆ - ಪ್ರತಿಭಟಿಸಲು ಶಾಲೆಯನ್ನು ಬಿಟ್ಟು ಅವಳೊಂದಿಗೆ ಸೇರಿಕೊಂಡರು.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
Greta Thunberg ಮೂರು ನೊಬೆಲ್ ಶಾಂತಿ ಪ್ರಶಸ್ತಿ ನಾಮನಿರ್ದೇಶನಗಳನ್ನು ಪಡೆದ ಈ ಯುವತಿ ಬಹುಮಟ್ಟಿಗೆ ಜಗತ್ತಿಗೆ ಪರಿಚಿತ ವ್ಯಕ್ತಿ. ಆದರೆ ಈ ಮೇಲೆ ಫೋಟೋದಲ್ಲಿ ಇರುವ ಯುವತಿಯರು ಸಹ ಅತಿ ಚಿಕ್ಕ ವಯ್ಯಸ್ಸಿನ ಸತ್ಯಾಗ್ರಹಕಾರಿಗಳು ಆದರೆ ಯಾರೀ ಗುಇವರ ಬಗ್ಗೆ ಗೊತ್ತಿಲ್ಲ ಏಕೆಂದರೆ ಇವರು ಇಂಡೋನೇಷ್ಯಾ ದೇಶದ ಅತಿ ದೂರದ ಬಾಲಿ ದ್ವೀಪ ದವರು.
ಒಬ್ಬಳ ಹೆಸರು "ಮೆಲಾಥಿ" (12 ವರ್ಷ)ಇನ್ನಬ್ಬಳು "ಇಸಾಬೆಲ್" (10 ವರ್ಷ) ಈ ಯುವತಿಯರು ಅತಿ ಚಿಕ್ಕ ವಯ್ಯಸ್ಸಿನಲ್ಲಿ ತಮ್ಮ ಪುಟ್ಟ ಸುಂದರ ದ್ವೀಪವನ್ನು ಪ್ಲಾಸ್ಟಿಕ್ ನಿಂದ ಸ್ವಚ್ಛವಾಗಿರಿಸಲು ಶಾಂತಿ ಸತ್ಯಾಗ್ರಹ ಮಾಡುವ ಬಗ್ಗೆ ನಿಶ್ಚಯಿಸಿದರು.
ಮಹಾತ್ಮಗಾಂಧಿಜಿ ಅವರು ಹೇಗೆ ಯಾವುದೇ ಹಿಂಸೆ ಮಾಡದೇ ಬರಿ ಉಪವಾಸ ಸತ್ಯಾಗ್ರಹ ಮಾಡಿಯೇ ಬ್ರಿಟಿಷರನ್ನು ಭಾರತ ದೇಶದಿಂದ ಹೊರಹಾಕುವಲ್ಲಿ ಸಫಲರಾಗಿದ್ದರ ಬಗ್ಗೆ ಇಂಟರ್ನೆಟ್ನಲ್ಲಿ ಓದಿ ಸ್ಫೂರ್ತಿ ಪಡೆದರು.
ತಮ್ಮ ಚಿಕ್ಕ ದ್ವೀಪವನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಈ ಇಬ್ಬರು ಸಹೋಧರಿಯರು ಗಾಂಧೀಜಿಯವರ ಶಾಂತಿ ಉಪವಾಸ ಸತ್ಯಾಗ್ರಹ ಮಾಡಲು ಪ್ರಾರಂಭಿಸಿದರು.
ನಾವು ಉಪಯೋಗಿಸುವ ಪ್ರತಿಯೊಂದು ವಸ್ತುಗಳಿಗೆ ಅದರದೇ ಆದ ಒಂದು ಸುಂದರ ಫ್ಯಾನ್ಸಿ ಪ್ಯಾಕಿಂಗ್ ಇರುತ್ತದೆ. ಹಾಗಾಗಿ ಬೆಳಿಗ್ಗೆ ಟೀ ಜೊತೆ ತಿನ್ನೋ ಬಿಸ್ಕೆಟ್ ಇಂದ ರಾತ್ರಿ ಮಲಗೋವಾಗ ಹಚ್ಚೊ ಮಾಸ್ಕಿಟೊ ಕಾಯಿಲ್ ವರೆಗೂ ಎಲ್ಲ ಪ್ಲಾಸ್ಟಿಕ್ ರಾಪ್ ಆಗಿರುತ್ತವೆ. ಪ್ಲಾಸ್ಟಿಕಲ್ಲಿ ಪ್ಯಾಕ್ ಆಗಿರವ ವಸ್ತುಗಳನ್ನು ಉಪಯೋಗಿಸಲು ಬರಿ ಒಂದು ನಿಮಷದಷ್ಟು ಸಮಯ ಬೇಕು ನಂತರ ಯಾರಿಗೂ ಉಪಯೋಗವಾಗದ ಆ ಪ್ಲಾಸ್ಟಿಕ್ ಕವರ್ ಎಲ್ಲೆಂದರೆಲ್ಲಿ ಬಿಸಾಡಲಾಗುತ್ತದೆ.
ಪ್ರತಿ ವಸ್ತುವೂಗೆ ಅದರವೆ ಆದ ಡೆಜಾಲವಿಂಗ್ (ಕೊಳೆಯುವ) ಟೈಮ್ ಇರುತ್ತದೆ.ಪ್ಲಾಸ್ಟಿಕ್ ನ ಡೆಜಾಲವಿಂಗ್ ಟೈಮ್ 500 ವರ್ಷ ಇರುತ್ತದೆ ಹಾಗಾಗಿ ನಾವು ಎಲ್ಲೆಂದರೆಲ್ಲಿ ಬಿಸಾಡುವ ಪ್ಲಾಸ್ಟಿಕ್ 500 ವರ್ಷಗಳ ಕಾಲ ಯಾರಿಗೂ ಉಪಯೋಗಕ್ಕೆ ಬಾರದ ಒಂದು ಕಸವಾಗಿ ಬಿದ್ದಿರುತ್ತದೆ.
ಆತಿಯಾದ ಪ್ಲಾಸ್ಟಿಕ್ ಕಸದಿಂದಾಗಿ ಮಿಲಾತಿ ಮತ್ತು ಇಸಾಬೆಲ್ ನ ಚಿಕ್ಕ ಐಲ್ಯಾಂಡ್ ಪೋಲುಷಿತವಾಗಿತ್ತು. ಇದರಿಂದ ಹಲವು ಸಮುದ್ರ ಜೀವಗಳಿಗು ಇದರಿಂದ ಸಮಸ್ಯೆ ಉಂಟಾಗಿತ್ತು.ಈ ತುಂಬಾ ಹಳೆಯ ಸಮಸ್ಯೆನ್ನು ಸರಿಪಡಿಸಲು ಈ ಅತಿ ಹೊಸ ಪಿಡಿಯ ಇಬ್ಬರು ಸಹೋದರಿಯರು ಪ್ಲಾಸ್ಟಿಕ್ಬಳಕೆಯ ನಿಷೇದ ಮಾಡಲಾರಂಭಿಸಿದರು. ಮತ್ತು ಆಹಾರ ಸೇವನೆಯನ್ನು ಸಹ ಅವರು ತ್ಯೆಜಿಸಿದರು.
ಮಹಾತ್ಮಾ ಗಾಂಧೀಜಿಯವರ ಉಪವಾಸ ಸತ್ಯಾಗ್ರಹದ ದಿಂದ ಸ್ಫೂರ್ತಿಗೊಂಡ ಅವರು ಪ್ಲಾಸ್ಟಿಕ್ ನಿಷೇದಕ್ಕಾಗಿ ಆಹಾರವನ್ನು ತ್ಯೆಜಿಸಿ ಉಪವಾಸ ಸತ್ಯಾಗ್ರಹ ಮಾಡಲಾರಂಭಿಸಿದರು, ಇದಲ್ಲದೆ ತಮ್ಮ ಅಕ್ಕ ಪಕ್ಕದ ಎಲ್ಲ ಪ್ರದೇಶದಲ್ಲಿ ಹರಡಿದ್ದ ಪ್ಲಾಸ್ಟಿಕ್ ಕಸವನ್ನು ಸಹ ಅವರು ಸ್ವಚ್ಚಗೊಳಿಸಲು ಪ್ರಾರಂಭಿಸಿದರು.
ಮಿಲಾತಿ ಮತ್ತು ಇಸಾಬೆಲ್ ನ್ನು ಕಂಡು ಹಲವು ಅವರ ವಯಸ್ಸಿನ ಚಿಕ್ಕ ಮಕ್ಕಳೆಲ್ಲ ಈ ಸತ್ಯಾಗ್ರದಲ್ಲಿ ಕೈ ಜೋಡಿಸಿದರು.
ಇದರಿಂದಾಗಿ ಈ ಇಬ್ಬರ ಸಹೋದರಿಯರ ಚಿಕ್ಕ ಸತ್ಯಾಗ್ರಹ ಒಂದು ಮಹಾ ಸತ್ಯಾಗ್ರಹವಾಗಿ ಬದಲಾಯಿತು. ಇವರ ಮಹಾಸತ್ಯಾಗ್ರಹವನ್ನು ಕಂಡ ಇಂಡೊನಿಯೇಷ್ಯಾ ನ ಬಾಲಿ ದ್ವೀಪದ ಗೋವರ್ನರ್ ಅವರು ಮೆತಾಲಿ ಮತ್ತು ಇಸಾಬೆಲ್ ನನ್ನ ಭೇಟಿಯಾದರು.
ಈ ಸತ್ಯಾಗ್ರದ ಮೂಲ ದ್ಯೇಯವನ್ನು ಅರಿತ ಅವರು ಬಾಲಿ ದ್ವಿಪದಲ್ಲಿ ಪ್ಲಾಸ್ಟಿಕ್ ಬ್ಯಾನ್ ಕಾನೂನು ಜಾರಿಗೆ ತಂದರು ಹಾಗು ಸುತ್ತಮುತ್ತಲಿನ ಹಲವು ಪ್ರದೇಶ ಗಳಲ್ಲು ಸಹಸ್ಟಿಕ್ ಬ್ಯಾನ್ ಕಾನೂನು ಜಾರಿಗೆ ತರುವ ಬಗ್ಗೆ ಅರಿವು ಮಾಡಿಸಿ ಕೊಟ್ಟರು.
ಸ್ನೇಹಿತರೆ ನೀವು ನಾವು 10 12 ವರ್ಷದರಿದ್ದಾಗ ಹೀಗೆ ಯಾವ ಸತ್ಯಾಗ್ರಹದ ಬಗ್ಗೆ ಯೋಚಿಸಿದ್ವಾ. ನೋಡಿ ಈ ಚಿಕ್ಕ ವಯಸ್ಸಿನಲ್ಲೇ ಸಮಾಜದಲ್ಲಿ ಇಂತಹ ದೊಡ್ಡ ಬದಲಾವಣೆ ಮಾಡುವ ಬಗ್ಗೆ ಯೋಚಿಸಿರುವ ಸಹೋದರಿಯರಿಗೆ ನಮ್ಮ ದೊಡ್ಡ ಸಲಾಂ.
ಸ್ನೇಹಿತರೆ ನಿಮ್ಮ ಮನೆಯಲ್ಲಿ ಅಥವಾ ಅಕ್ಕಪಕ್ಕದಲ್ಲಿ ಇರುವ ಚಿಕ್ಕ ಮಕ್ಕಳಿಗೆಮಿಲಾತಿ ಮತ್ತು ಇಸಾಬೆಲ್ ಈ ಸ್ಟೋರಿಯ ಬಗ್ಗೆ ಖಂಡಿತಾ ಓದಿ ತಿಳಿಸಿ ಏಕೆಂದರೆ ಜಗತ್ತಲ್ಲಿ 25% ರಷ್ಟುಚಿಕ್ಕ ವಯಸ್ಸಿನ ಮಕ್ಕಳಿದ್ದು ಇವರೇ ನಮ್ಮ 100% ರಷ್ಟು ಭವಿಷ್ಯ ಹಾಗಾಗಿ ಈ ಸ್ಟೋರಿ ಅವರಿಗೆ ಒಂದು ಮಾದರಿ ಹಾಗು ಮಾರ್ಗದರ್ಶನ ವಾಗಬಹುದು.
ಫ್ರೆಂಡ್ಸ್ ಹೇಗನ್ನಿಸ್ತು ನಿಮಗೆ ಈ ಪ್ಲಾಸ್ಟಿಕ್ ಫ್ರೀ ಸ್ಟೋರಿ, ನಿಮಗೆ ಈ ಸ್ಟೋರಿ ಇಷ್ಟ ಆದಲ್ಲಿ ಕಾಮೆಂಟ್ ಬಾಕ್ಸ್ ನಲ್ಲಿ ನಿಮ್ಮ ಪ್ರೀತಿ ತೋರಿಸಿ ಲೈಕ್ ಮಾಡಿ ಶೇರ್ ಮಾಡಿ
ಮತ್ತೆ ಸಿಗೋಣ ಮತ್ತೊಂದು ಹೊಸ ಸ್ಟೋರಿಯೊಂದಗೆ ಬೇಗನೆ...
Please do not enter any spam link here